ಗಾವಂಕಾರ, ಎಸ್.ಡಿ.
1925-96. ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ, ಶಿಕ್ಷಣ ತಜ್ಞ, ರಾಜಕಾರಣಿ. ಸಖಾರಾಮ ದತ್ತಾತ್ರೇಯ ಗಾಂವಕರ ಇವರ ಪೂರ್ತಿ ಹೆಸರು. ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲ್ಲೂಕಿನ ಹನಕೋನದಲ್ಲಿ 1925 ಸೆಪ್ಟಂಬರ್ 2ರಂದು ಜನಿಸಿದರು. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ಕಾರವಾರದಲ್ಲಿ ಪಡೆದರು. ಅನಂತರ ಧಾರವಾಡದ ಕರ್ನಾಟಕ ಕಾಲೇಜು, ಬೆಳಗಾಂವಿಯ ಆರ್.ಎಲ್.ಕಾನೂನು ಕಾಲೇಜಿನಲ್ಲಿ ಶಿಕ್ಷಣಪಡೆದರು. ಕಾರವಾರದಲ್ಲಿ ವಕೀಲ ವೃತ್ತಿ ಪ್ರಾರಂಭಿಸಿ (1952) ಅಪಾರ ಯಶಸ್ಸು ಗಳಿಸಿ ಜನಪ್ರಿಯರಾದರು.
ಕಾರವಾರ ನಗರಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 26ನೆಯ ವಂiÀÄಸ್ಸಿನಲ್ಲೇ ಇವರು ತಾವೊಬ್ಬ ದಕ್ಷ ಆಡಳಿತಗಾರರೆಂಬುದನ್ನು ತೋರಿಸಿದರು. ರಾಜಕೀಯ, ಸಾರ್ವಜನಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೆಲಸಗಳಲ್ಲಿ ಉತ್ಸಾಹದಿಂದ ದುಡಿಯುವುದು ಇವರ ಜಾಯ ಮಾನವಾಗಿತ್ತು. ಕೆಲಕಾಲ ಇವರು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ಸಮಿತಿಯ ಕಮಿಶನರ್ ಆಗಿ ದುಡಿದರು (1960-72). ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ, ಬೋಟ ಬಿಲ್ಡಿಂಗ್ ಯಾರ್ಡ್ ಸಮಿತಿಯ ಸದಸ್ಯ, ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕ,ಕೊಂಕಣ ಮರಾಠಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ಕೆನರಾ ಬ್ಯಾಂಕ್ ನಿರ್ದೇಶಕ, ಜನತಾ ಕೋ ಆಪರೇಟೀವ್ ಸ್ಟೋರ್ಸ್ ಸಂಸ್ಥಾಪಕ, ಬಾಡದ ಶಿವಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ-ಹೀಗೆ ಬಹುಮುಖವಾಗಿ ಸೇವೆ ಸಲ್ಲಿಸಿದರು. ಮಹಾರಾಷ್ಟ್ರದ ಕೊಲಾಬಾದಲ್ಲಿ ಸಿವಿಲ್ ನ್ಯಾಯಾದಿsೕಶರಾಗಿ ಇವರನ್ನು ನೇಮಿಸಲಾಯಿತು (1961). ಕೆಲವು ತಿಂಗಳುಗಳಲ್ಲಿಯೆ ರಾಜಕೀಯ, ರಂಗಪ್ರವೇಶಿಸಿ ರಾಜೀನಾಮೆ ನೀಡಿದರು.

ಇವರು ಕಾಂಗ್ರೆಸ್ ಪಕ್ಷದಿಂದ ಕರ್ನಾಟಕ ವಿಧಾನಸಭೆಗೆ ಪ್ರಥಮ ಬಾರಿಗೆ ಆಯ್ಕೆಯಾದರು(1957). ವಿಧಾನಸಭೆೆಯಲ್ಲಿ ಕಾರವಾರ ಕ್ಷೇತ್ರವನ್ನು ಪ್ರತಿನಿದಿsಸಿದ್ದರು (1962-74). ವಿಧಾನ ಪರಿಷತ್ತಿನ ಉಪಸಭಾಪತಿಗಳಾಗಿದ್ದ (1966-68)ಇವರು, ಅನಂತರ ವಿಧಾನ ಪರಿಷತ್ತಿನ ಸಭಾಪತಿಗಳಾಗಿಯೂ ಸೇವೆ ಸಲ್ಲಿಸಿದರು (1972-74).ಸಭಾಪತಿ ಹುದ್ದೆಯನ್ನು ಅತ್ಯಂತ ಸಮರ್ಥ ವಾಗಿ ನಿರ್ವಹಿಸಿದರು. ಮೂರನೆಯ ಬಾರಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಗೊಂಡು (1996) ನಿಧನ ಹೊಂದುವವರೆಗೂ ಕಾರ್ಯನಿರ್ವಹಿಸಿದರು.

ಆಫ್ರಿಕದ ಮಲಾವಿಯಲ್ಲಿ ನಡೆದ ಜಾಗತಿಕ ಸಂಸದೀಯ ಸಮ್ಮೇಳನದಲ್ಲಿ ನಿಯೋಗದ ಸದಸ್ಯರಾಗಿ ಭಾಗವಹಿಸಿದರು (1972). ರೋಟರಿ ಸಂಸ್ಥೆಯ ಸದಸ್ಯರಾಗಿ ಯುರೋಪ್, ಅಮೆರಿಕ ಮೊದಲಾದ ರಾಷ್ಟ್ರಗಳಲ್ಲಿ ಪ್ರವಾಸ ಕೈಗೊಂಡರು. ಇವರು ಶ್ರೇಷವಿ ಸಂಸದೀಯ ಪಟುವೆಂದು ಹೆಸರು ಗಳಿಸಿದ್ದರು. ತಮ್ಮ ಸ್ವಂತ ಪ್ರತಿಭೆಯಿಂದ ಉನ್ನತ ಸ್ಥಾನ ಗಳಿಸಿದ ಇವರು 1996 ಮೇ 21ರಂದು ನಿಧನಹೊಂದಿದರು. ಕುಸುಮಾ ಇವರ ಧರ್ಮಪತ್ನಿ. ಇವರಿಗೆ ಎರಡು ಗಂಡು ಎರಡು ಹೆಣ್ಣು ಮಕ್ಕಳು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ